+91 7892457025
WELCOME TO
IIಓಂ ಶ್ರೀ ಗಣಪತಯಾ ನಮಃ II IIಕುಲದೇವತಾ ಪ್ರಸನ್ನ II
ಶ್ರೀ ಉಳ್ಳಾಲ್ತಿ ಮತ್ತು ಪರಿವಾರ ದೈವಗಳ ದೈವಸ್ಥಾನ (ರಿ) ಎಂಬ ನಾಮಧೇಯದಿಂದ ಕರೆಯಲ್ಪಡುವ ಈ ದೈವಸ್ಥಾನವು ಬಾಕುಡ ಸಮುದಾಯ 18 ದೈವಸ್ಥಾನಗಳಲ್ಲಿ ಒಳಪಟ್ಟ ಒಂದು ದೈವಸ್ಥಾನವಾಗಿರುತ್ತದೆ. ಈ ದೈವಸ್ಥಾನ ಕುಟುಂಬವನ್ನು ಕರ್ಲ್ನಂದಿನವರು ಕುಟುಂಬ ಎಂದು ಕರೆಯಲ್ಪಡು ತ್ತದೆ ಈ ದೈವಸ್ಥಾನವು ಯಾವ ಕಾಲದಲ್ಲಿ ಸ್ಥಾಪಿಸಲ್ಪಟ್ಟಿದೆ ಮತ್ತು ದೈವಾರಾಧನೆ ಯಾವ ಕಾಲದಿಂದ ನಡೆಸಲ್ಪಟ್ಟಿದೆ ಎಂದು ನಮಗೆ ತಿಳಿದು ಬಂದಿಲ್ಲ ಸುಮಾರು 7೦೦ ವರ್ಷಗಳ ಹಿಂದೆ ಈ ದೈವಸ್ಥಾನವು ಸ್ಥಾಪಿಸಲ್ಪಟ್ಟಿದೆ ಎಂಬ ಪ್ರತೀತಿ. ಈ ದೈವಸ್ಥಾನದ ಮೂಲ ತಿಂಬರ ಎಂಬ ಸ್ಥಳದಲ್ಲಿರುವ ನಾಗ ದೇವರ ಸಾನಿಧ್ಯ ವಾಗಿರುತ್ತದೆ. ಇಲ್ಲಿಯ ನಾಗ ದೇವರ ಸನ್ನಿದಿಗೆ ದೈವಸ್ಥಾನದಲ್ಲಿ ಆರಾಧಿಸಲಡ್ಡುವ ದೈವಗಳು ಶ್ರೀ ಉಳ್ಳಾಲ್ತಿ, ಮಹಿಸಂದಾಯ, ಪಿಲಿಚಾಮುಂಡಿ, ಬಿಲ್ಲಾರ, ಅಣ್ಣಪ್ಪ ಪಂಜುರ್ಲಿ, ಬಬ್ಬರ್ಯ, ಜುಮಾದಿ ಬಂಟ ಮತ್ತು ಗುಳಿಗ ಮೊದಲಾದ ದೈವಗಳು ಪ್ರಥಮವಾಗಿ ನಾಗ ಸನ್ನಿದಿಗೆ ಬಂದು ಅಲ್ಲಿಂದ ದೃಷ್ಟಿ ಇಟ್ಟು ನೋಡುವಾಗ ಮಜಲು ಎಂಬ ಸ್ಥಳವು ಗೋಚರಿಸಿತು. ಅದನ್ನು ತಮ್ಮ ನೆಲೆಯಾಗಿ ಕಂಡುಕೊಂಡು ಅಲ್ಲಿ ನೆಲೆಯಾಗಿ ನಮ್ಮ ಪೂರ್ವಿಕರಿಂದ ಆರಾಧಿಸಲ್ಪಟ್ಟಿತು ಎಂಬ ವಿಷಯ ನಮ್ಮ ಪೂರ್ವಿಕರಿಂದ ತಿಳಿದು ಬಂದಿರುತ್ತದ್ದೆ. ಅಂದಿನಿಂದ ಇಂದಿನ ವರೆಗೂ ಎರಡು ವರ್ಷಗಳಿಗೊಮ್ಮೆ ನಾಗಬ್ರಹ್ಮ ಸೇವೆ ನಾಗಬನದಲ್ಲಿ ಮತ್ತು ದೈವಗಳ ನೇಮೋತ್ಸವ ದೈವಸ್ಥಾನದ ಸನ್ನಿಧಿಯಲ್ಲಿ ನಡೆದು ಬಂದಿರುತ್ತದ್ದೆ. ನಮ್ಮ ಈ ಜಾಲತಾಣವವನ್ನು ವೀಕ್ಷಿಸುತಿರುವ ಭಕ್ತಾಧಿಗಳಿಗೆ ಆದರ ಪೂರಕವಾಗಿ ಸ್ವಾಗತಿಸುತ್ತಾ ನಮ್ಮಿಂದ ಆರಾಧಿಸಲ್ಪಡುವ ಶ್ರೀ ನಾಗದೇವರು ಮತ್ತು ಪರಿವಾರ ದೈವಗಳು ತಮಗೂ ತಮ್ಮ ಕುಟುಂಬ ಬಾಂಧವರಿಗೂ ಆಯಾರಾರೋಗ್ಯ ಸುಖ ಸಂಪತನ್ನು ಕರುಣಿಸಿ ರಕ್ಷಿಸಲು ಪ್ರಾರ್ಥಿಸುತ್ತೇವೆ.
History of daivasthana
Trust details
Donation details
News
Thimbara Shri Ullalthi Mathu Parivara Daivagala Daivasthana Kondevooru Majalu Uppala Kasaragod.
Thimbara shree ullathi matthu parivara daivagala daivasthana (R). Reg No. 488/10, majalu, Kondevoor, Uppala(PO) manjeshwar(Taluk) Kasargod(Dist) kerala - 671322.
thimbarashree@gmail.com
+91 78924 57025